Call Us Now: 0824-2223366

ಕರ್ನಾಟಕ ರಾಜ್ಯೋತ್ಸವ 2023

“ಕರ್ನಾಟಕದ ಸುಪುತ್ರರು ನಾವು. ಕನ್ನಡಿಗರೆಲ್ಲರೂ ಭಾಗ್ಯವ0ತರು. ಈ ನಾಡು ನಮಗೆ ಎಲ್ಲವನ್ನು ನೀಡಿದೆ. ನಾಡಿನ ನೆಲ ಜಲ ಸ0ರಕ್ಷಣೆಗಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿ0ದ ಒ0ದಾಗಿ ಹೋರಾಡಬೇಕು. ನಮ್ಮ ಪ0ಚಸೂತ್ರಗಳನ್ನು ಗೌರವಿಸುತ್ತಾ, ಅನೇಕ ಸವಾಲುಗಳನ್ನು ಜವಾಬ್ದಾರಿಯಿ0ದ ಸ್ವೀಕರಿಸುತ್ತಾ, ನಮಗೆ ಸಿಕ್ಕ ಅವಕಾಶಗಳನ್ನು ತೊಟ್ಟಿಲುಗಳನ್ನಾಗಿ, ಮೆಟ್ಟಿಲುಗಳನ್ನಾಗಿ ಮಾಡಿಕೊ0ಡು ಕನ್ನಡಿಗರು ಬೆಳೆಯಬೇಕು. ಇದು ಕೇವಲ ಒ0ದು ದಿನದ ಹಬ್ಬವಾಗದೇ, ಪ್ರತಿಯೊಬ್ಬ ಕನ್ನಡಿಗರ ಸ0ಭ್ರಮದ ನಿತ್ಯ ಬದುಕಿನ ಹಬ್ಬವಾಗಬೇಕು” ಎ0ದು ಬಿಜೈ ಚರ್ಚಿನ ಸಹಾಯಕ ಧರ್ಮಗುರುಗಳಾದ ವ0|ಫಾ| ಲೆಸ್ಟನ್ ಲೋಬೊರವರು ಅವರು ಕರೆ ನೀಡಿದರು.

ಅವರು ಲೂಡ್ರ್ಸ್ ಸೆ0ಟ್ರಲ್ ಸ್ಕೂಲ್‍ನಲ್ಲಿ ಆಯೋಜಿಸಿದ 68ನೇ ‘ಕರ್ನಾಟಕ ರಾಜ್ಯೋತ್ಸವ’ದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಶಾಲೆಯ ಪ್ರಾ0ಶುಪಾಲರಾದ ವ0|ಫಾ| ರಾಬರ್ಟ್ ಡಿ’ಸೋಜ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, “ಪ್ರತಿಯೊಬ್ಬರೂ ಸಹೋದರ ಸಹೋದರಿಯರ0ತೆ ಆದರ್ಶ ನಾಗರಿಕರಾಗಿ ಬಾಳಬೇಕು. ರಾಜ್ಯದ ಮಣ್ಣಿನ ರಕ್ಷಣೆಗಾಗಿ ಹೋರಾಡಬೇಕು. ತಾಯ್ನಾಡಿನ ಸ0ರಕ್ಷಣೆಗಾಗಿ ಸರ್ವರೂ ಒ0ದಾಗಿ, ಸರ್ವ ಜನಾ0ಗದ ಶಾ0ತಿಯ ತೋಟವನ್ನಾಗಿ ನಾಡನ್ನು ಬೆಳೆಸಬೇಕು. ಎಲ್ಲ ಸ0ಸ್ಕೃತಿಯನ್ನು ಗೌರವಿಸುತ್ತಾ ಪರಸ್ಪರ ಪ್ರೀತಿ, ಸಹಕಾರ ಮತ್ತು ವಿಶ್ವಾಸದಿ0ದ ಬದುಕಬೇಕು” ಎ0ಬ ಸ0ದೇಶವನ್ನು ನೀಡಿದರು.
ವೇದಿಕೆಯಲ್ಲಿ ಉಪಪ್ರಾ0ಶುಪಾಲೆಯರಾದ ಶ್ರೀಮತಿ ಬೆಲಿಟಾ ಮಸ್ಕರೇನ್ಹಸ್, ಶ್ರೀಮತಿ ಅನಿತಾ ಥೋಮಸ್ ಮತ್ತು ವ0|ಫಾ| ಅರುಲ್ ಜೋಸೆಫ್ ಉಪಸ್ಥಿತರಿದ್ದರು. ಶಾಲೆಯ ವತಿಯಿ0ದ ಮುಖ್ಯ ಅತಿಥಿಗಳನ್ನು ಹೂಗುಚ್ಛ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕಿ ಲೊಲಿಟಾ ಕುವೆಲ್ಲೊರವರು ಮುಖ್ಯ ಅತಿಥಿಗಳ ಕಿರು ಪರಿಚಯವನ್ನು ಮಾಡಿದರು. ನಾಡಗೀತೆಯಾದ “ಜಯ ಭಾರತ ಜನನಿಯ ತನುಜಾತೆ”ಯನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡಿದರು. ವೇದಿಕೆಯಲ್ಲಿರುವ ಗಣ್ಯರು ಹಾಡುವಿಕೆ ಮತ್ತು ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ನೀಡಿ ಅಭಿನ0ದಿಸಿದರು.
ವಿದ್ಯಾರ್ಥಿಗಳಾದ ಶ್ರವಣ್ ರಾಮ್ ನೆರೆದಿರುವ ಗಣ್ಯರನ್ನು ಸ್ವಾಗತಿಸಿ, ಸಾತ್ವಿ ಶೆಟ್ಟಿ ದಿನದ ಪ್ರಾಮುಖ್ಯತೆಯನ್ನು ವಿವರಿಸಿದರು. ವಿದಾತ್ ಶೆಟ್ಟಿ ಮತ್ತು ತನ್ವಿ ಶೆಟ್ಟಿ ಏಕಪಾತ್ರಾಭಿನಯವನ್ನು ಪ್ರದರ್ಶಿಸಿದರು. ಕನ್ನಡ ಉಳಿಸಿ ಮತ್ತು ಕನ್ನಡ ಬೆಳೆಸಿ ಕಿರುಪ್ರಹಸನವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಶಿಕ್ಷಕಿ ಲೊಲಿಟಾ ಕುವೆಲ್ಲೊ ಕಾರ್ಯಕ್ರಮ ಸ0ಯೋಜಿಸಿ, ರತ್ನಾಕರ ಎಸ್. ಆಚಾರ್ಯ, ರೇಖಾ ನವೀನ್, ಸೌಮ್ಯ ಕೆ., ಐವನ್ ಮಸ್ಕರೇನ್ಹಸ್, ರೋಶನ್ ಕೊರ್ಡೊರೋ ಮತ್ತು ರೋಶನ್ ಸಿಕ್ವೇರಾ ಸಹಕರಿಸಿದ್ದರು. ಸ್ಟೆಫಿ ಎ0ಜಲ್ ಡಿ’ಸೋಜ ಮತ್ತು ಭೂಮಿಕ ಎಸ್. ಅ0ಚನ್ ಕಾರ್ಯಕ್ರಮವನ್ನು ನಿರೂಪಿಸಿ, ಸಾನ್ವಿ ಆರ್ ಎಸ್ ಧನ್ಯವಾದ ಸಮರ್ಪಿಸಿದರು.